ಪ್ರಚಲಿತ ಪೋಸ್ಟ್‌ಗಳು

ಭಾನುವಾರ, ನವೆಂಬರ್ 7, 2010

ಹಾರಿದೆಯಾ ಹಕ್ಕಿ

ಹಾರಿದೆಯಾ ಹಕ್ಕಿ ಹಾರಿದೆಯಾ ಹಕ್ಕಿ ಆಕಾಶದಾಚೆ ಮರಳಿ ಬಾರದೆ ಗೂಡಿಗೆ ಹೆತ್ತ ತಾಯಿಯ ಮರೆತು, ಹಾರಿದೆಯಾ ಹಕ್ಕಿ? ತನಗಿಲ್ಲವಾದ್ರು ತುತ್ತು ನಿನಗಿರಲೆಂದು ಉಳಿಸಿ ಉಣಿಸಿ ಹರಸಿದ ಹೆತ್ತ ತಾಯಿಯ ಮರೆತು ಹಾರಿದೆಯಾ ಹಕ್ಕಿ? ಕಷ್ಟಗಳು ನೂರಾರು ತನಗೆಷ್ಟೇ ಬರಲಿ, ಕಂದನಾ ಬದುಕು ಬಾಡದಿರಲಿ ಹಾರಲಿ ಆಗಸದಿ ರಾಜನಾಗಿ ಮೆರೆಯಲಿ ಎಂದು ಹಾರುವುದ ಕಲಿಸಿದವಳ ಮರೆತು ಹಾರಿದೆಯಾ ಹಕ್ಕಿ? ತಾಯಿಗಿಂತ ಮಿಗಿಲಾದುದು ಮುಗಿಲಾಚೆ ಎಲ್ಲಿದೆಯೋ? ಅದೇಕೆ ಹಾರಿದೆಯೋ ಹಕ್ಕಿ ಆಕಾಶದಾಚೆ ಮರಳಿ ಬಾರದೆ ಗೂಡಿಗೆ. ಕರಗುತಿದೆ ಕಾಯ ಮರಗುತಿದೆ ಮನಸು ಕಣ್ಣುಗಳು ಬಾಡಿವೆ,ಬತ್ತಿವೆ ಬರುವೆಯಾ ಹಕ್ಕಿ ಉಸಿರು ನಿಲ್ಲುವ ಮುನ್ನ. ಹಾರಿದೆಯಾ ಹಕ್ಕಿ ಆಕಾಶದಾಚೆ ಮರಳಿ ಬಾರದೆ ಗೂಡಿಗೆ.